Posts

ನಂಬಿಕೆಯೇ ಜೀವನ

 ನುಡಿದ ನುಡಿ. ಹಾಡಿದ ಮಾತು. ಕೊಟ್ಟ ಭಾಷೇ. ನಂಬಿಕೆಯ ನಡೆ. ಸ್ವಾರ್ಥ ರಹಿತ ತುಡಿತ. ಅಪೇಕ್ಷ ರಹಿತ ಮಿಡಿತ. ಸಮಯ ರಹಿತ ಸಹಾಯ. ಸಂಯಮ ರಹಿತ ಉಪಾಯ. ರಕ್ತವೋ, ಶಕ್ತವೋ, ಅಶಕ್ತವೋ, ಹಣವೋ, ಅಸ್ತಿಯೋ, ಮದವೋ, ತಾನು ದುಡಿದ ಅನ್ನವೇ ಪರಮ ಶ್ರೇಷ್ಠ. ಇದನ್ನು ತಿಳಿದವನು ತನಗೆ ತಾನೇ ವಸಿಷ್ಠ. ನಂಬಿಕೆ ಕಳೆದುಕೊಡ ವ್ಯಕ್ತಿಯ ಪೂಜೆ ಸಲ್ಲದು. ನಮ್ಮ ಹಂತ ಹಂತದ ಶ್ರಮಿಕ ಬೆಳವಣಿಗೆ ನಿಲ್ಲದು. ಯಾರ ಯಾರ ಮೇಲಿನ ನಂಬಿಕೆಯು ಶಾಶ್ವತವು ಅಲ್ಲಾ. ನಂಬಿಕೆಯ ಮೇಲಿನ ದಾಳಿಗಳು ನಿಲ್ಲುತಲು ಇಲ್ಲಾ. ಆ ಪವಿತ್ರ ನಂಬಿಕೆ ಇದ್ದರೆಷ್ಟು, ಸತ್ತರೆಷ್ಟು., ನಂಬಿಕೆಯಿಲ್ಲದ ವ್ಯಕ್ತಿಗಳ ಸಹವಾಸ ಫುಲ್ ವೇಷ್ಟು. ಎನ್ನರಸಿ ಮನು ಕುಮಾರ.

ಗೌರವದ ನಡತೆ

Image
 ಮಾತು ಹಿಡಿತ ಮೀರಿ ಸ್ವಾರ್ಥ ಮಿತಿ ಮೀರಿ ಅಹಂ ನೆತ್ತಿಗೆ ಏರಿ ಕ್ರೋಧ ಶಕ್ತಿ ಮೀರಿ|| ಗೌರವಕ್ಕೆ ಅಗೌರವ ತೋರಿ ನಂಬಿಕೆಗೆ ಅಪನಂಬಿಕೆ ತೋರಿ|| ನಾವು ಕೊಟ್ಟ ಗೌರವವನ್ನ ಉಳಿಸಿಕೊಳ್ಳೋ, ಯೋಗ್ಯತೆ. ಇಲ್ಲವಾದ ಮೇಲೆ ಎನ್ನಿದರೆ ಏನು ಎಲ್ಲಾ ಮಣ್ಣು|| ಮನಸಿಗೆ ಅಗೋ ಗಾಯ ಎಂದಿಗೂ ಮಗಾದ ಹುಣ್ಣು|| ನಾನು, ನಾನೇ, ನಾವೇ ಎಂಬ  ತೋರ್ಪಡಿಕೆಯ ಜೀವನ. ಒಂಟಿ ಪಿಶಾಚಿಗೆ ಕೊಟ್ಟ ಆಹ್ವಾನದಂತೆ ಈ ವಾಹನ||

ಎಚ್ಚರ

ಎಚ್ಚರ., ಕೇಳಿಯು ಕೇಳದಂತೆ ಇರಬೇಕು ನೋಡಿಯೂ ನೋಡದಂತೆ ಇರಬೇಕು ಕೊಟ್ಟರು ಕೊಡದಂತೆ ಇರಬೇಕು ಮಾತನಾಡಿದರು ಮಾತನಾಡದಂತೆ ಇರಬೇಕು ತಿಳಿದು ತಿಳಿಯದಂತೆ ಇರಬೇಕು ಒಪ್ಪಿಯೂ ಒಪ್ಪದಂತೆ ಇರಬೇಕು ಎಲ್ಲ ವಿಚಾರ ನಮ್ಮ ಗಮನದಲ್ಲಿರಬೇಕು.

ಚೀನಾದ ಬಿದಿರಿನಂತೆ ಬೆಳವಣಿಗೆ ಇರಬೇಕು

Image
ಗೆಳೆಯರೇ ಚೀನಾದ ಬಿದಿರಿನ ಕಥೆ ಯಾರಿಗೆ ತಿಳಿದಿಲ್ಲ ಹೇಳಿ ಒಂದಲ್ಲ ಓಂದು ಮಾಧ್ಯಮ ಮೂಲಕ ತಿಳಿದುಕೊಂಡಿರುತ್ತೇವೆ. ಹಾಗೇ ನಮ್ಮ ಜೀವನವು ಕೂಡ. ಈ ಚೀನಾದ ಓಂದು ವರ್ಗದ ಬಿದಿರಿನ ಬೀಜ ನೆಲಕ್ಕೆ ಬಿದ್ದ ನಂತರ ಸರಿ ಸುಮಾರು 4 ರಿಂದ 5 ವರ್ಷದ ತನಕ ತನ್ನ ಇರುವಿಕೆಯನ್ನ ಯಾರಿಗೂ ಕೂಡ ತೋರ್ಪಡಿಸಿಕೊಳ್ಳದೆ ತನ್ನಷ್ಟಕ್ಕೆ ತನ್ನ ಬೇರುಗಳನ್ನ ಗಟ್ಟಿಗೊಳಿಸಿಕೊಳ್ಳುತ್ತದೆ. 5 ವರ್ಷದ ನಂತರ ಈ ಬಿದಿರು ಮೊಳಕೆ ಹೊಡೆದು 90 ಅಡಿಗಳಷ್ಟು ಎತ್ತರಕ್ಕೆ ಕೇವಲ 6 ವಾರಗಳಲ್ಲಿ ಬೆಳೆಯುತ್ತದೆ. ಆಶ್ಚರ್ಯ ಅಲ್ವಾ ಹೌದು ಪ್ರಕೃತಿ ವಿಸ್ಮಯಗಳೇ ಹಾಗೇ. ಐದೂ ವರ್ಷಗಳ ತನಕ ನೀವು ಯಾವುದೇ ರೀತಿಯ ಗೊಬ್ಬರ ಮತ್ತು ನೀರನ್ನು ಹಾಕಿದರು ಕೂಡ ಬಿದಿರು ಬೆಳೆಯುವುದಿಲ್ಲ.  ನಮ್ಮ ಜೀವನವನ್ನು ಈ ಬಿದಿರಿನೊಂದಿಗೆ ಹೋಲಿಕೆ ಮಾಡಿದಾಗ ನಮ್ಮ ಬೆಳವಣಿಗೆ ಕೂಡ ಈ ಬಿದಿರಿನಂತೆ ಇರಬೇಕು. ನಾವು ಯಾವಾಗ ನ್ಯಾಯಯುತವಾದ ಮಾರ್ಗದಲ್ಲಿ ಆಂತರಿಕ ಮತ್ತು ಬಾಹ್ಯವಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಒಂದಷ್ಟು ವರ್ಷಗಳ ಕಾಲ ಸಧೃಢಗೊಳ್ಳುತ್ತ ಹೋದರೆ ಆಗ ನಮ್ಮ ನಮ್ಮ ಗುರಿಯನ್ನು ಮುಟ್ಟಲಿಕ್ಕೆ ಸಾಧ್ಯ. ಹಣ ಮತ್ತು ಸಮಯ ಎರಡು ಕೂಡ ನಮ್ಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

ಬದಲಾವಣೆಯ ಮಹಾಪರ್ವ ಕಾಲ

ಪ್ರಸ್ತುತ ವಿದ್ಯಾಮಾನದಲ್ಲಿ ಬದಲಾವಣೆ ಎನ್ನುವುದು ನಾವು ಚಿಂತಿಸುವ ವೇಗಕ್ಕಿಂತ ಹೆಚ್ಚು ವೇಗವಾಗಿ ಬದಲಾವಣೆಯಾಗುತ್ತಿದೆ. ಪ್ರತಿಯೊಂದು ವಿಷಯದಲ್ಲಿ ಅಥವಾ ಕ್ಷೇತ್ರದಲ್ಲಿ ಕೂಡ ಇಂದು ಬದಲಾವಣೆಯನ್ನ ಕಾಣಬಹುದು. ಬದಲಾವಣೆಗೆ ಮತ್ತಷ್ಟು ವೇಗ ಹೆಚ್ಚಿಸಿದ್ದು ಕಣ್ಣಿಗೆ ಕಾಣದ ಕರೊನಾ. ಯಾವುದೇ ಒಂದು ನಿರ್ದಿಷ್ಟ ಕ್ಷೇತ್ರದ ಪ್ರಾವೀಣ್ಯತೆಯನ್ನ ಹೊಂದಿದ್ದೇನೆ ಎಂದು ಕೂರುವ ಬದಲು ಈ ಕ್ಷೇತ್ರದಲ್ಲಿ ಯಾವ ರೀತಿಯ ಬದಲಾವಣೆ ಹೊಂದುತ್ತಿದೆ ಮತ್ತು ಹೊಂಡಬೇಕಿದೆ ಎಂದು ತಾರ್ಕಿಕ ಮತ್ತು ತಂತ್ರಜ್ಞಾನ ಸಹಾಯದಿಂದ ಯೋಚಿಸಿ ಆ ಬದಲಾವಣೆಯನ್ನ ಅಪ್ಪಿ ಒಪ್ಪಿಕೊಳ್ಳಬೇಕು ಇಲ್ಲದೆ ಹೋದರೆ ಹೊಸ ಹೊಸ ಅಲೋಜನೆಯಲ್ಲಿ ಹೊಸದಾಗಿ ಬರುವ ಆವಿಷ್ಕಾರಗಳು ನಮ್ಮನ್ನು ಪಕ್ಕಕ್ಕೆ ತಳ್ಳಿ ಮುಂದೇ ಸಾಗುತ್ತವೆ. 1979 ರಲ್ಲಿ ಮೊದಲ ಬಾರಿಗೆ ಮೊಬೈಲ್ ಅಥವಾ ದೂರವಣಿಯನ್ನ ಜಗತ್ತಿಗೆ ಜಪಾನಿನ ನಿಪ್ಪೋನ್ ಎಂಬ ಸಂಸ್ಥೆ ಪರಿಚಯ ಮಾಡಿತು. 4 ದಶಕಗಳಲ್ಲಿ ಈ ದೂರವಾಣಿ ಕ್ಷೇತ್ರ ಎಷ್ಟು ಬದಲಾವಣೆಯನ್ನ ಹೊಂದಿದೆ ಎಂದರೆ ಒಂದು ಕಾಲದಲ್ಲಿ ಯಾರ ಮನೆಯಲ್ಲಿ ದೂರವಾಣಿ ಫೋನ್ ಹೊಂದಿರುತ್ತಾರೋ ಅವರೇ ಊರಿನ ಶ್ರೀಮಂತರು ಎಂದು ಭಾವಿಸುತ್ತಾರೆ. ಕೇವಲ ಮುಂದುವರಿದ ದೇಶಗಳು ಅಷ್ಟೇ ಉಪಯೋಗಿಸಲಿಕ್ಕೆ ಇದ್ದ ಉಪಕರಣ ಎಂದು ಭಾವಿಸಲಾಗಿತ್ತು. ಆದರೆ ಇಂದು ದೂರವಾಣಿ ಕ್ಷೇತ್ರದಲ್ಲಿ ಮಹಾಕ್ರಾಂತಿಯಿಂದ ಸಮಾಜದ ಎಲ್ಲರ ಜೇಬಿನಲ್ಲೂ ಬಂದು ಕುಳಿತಿದೆ. ಇಂದು ಪ್ರಪಂಚದ ಯಾವುದೇ ವಿಷಯವನ್ನು ಕೇವಲ ಬೆರಳ ತುದಿಯಲ್ಲಿ

ಕಠಿಣ ಆದ್ರೂ ಸತ್ಯ

 ಕಠಿಣ ಆದ್ರೂ ಸತ್ಯ ಜನ ದುಡ್ಡಿನ ಹಿಂದೆ ಹೋಗಬೇಡ ಸ್ನೇಹ ಸಂಬಂಧ ಎಲ್ಲಾ ಕಳೆದುಕೊಳ್ಳಬೇಕಾಗುತ್ತೆ ಅಂತಾರೆ  ಏದು ವರ್ಷ ಬಿಟ್ಟು ಅದೇ ಜನ ಎನ್ ಸಂಪಾದನೆ ಮಾಡಿದ್ದಿಯ ಮನೆ ಕಟ್ಟಿಯಾ ಎಂತ ಕೇಳುತ್ತಾರೆ.

ಅದೃಷ್ಟ

ಅದೃಷ್ಟ ಅನ್ನೋದು ಅದರ ಇಷ್ಟದ ರೀತಿ.., ಕಾರ್ಯದಲ್ಲಿ ಮಗ್ನನಾಗು ಯಾಕಂದ್ರೆ  ಯಶಸ್ಸು ಅದೃಷ್ಟಕ್ಕೆ ಇಷ್ಟ👍🏻